ಜಾಗವೇ ಒಂದು ನಟರಂಗ, ನಾವೆಲ್ಲ ಅದರಲ್ಲಿ ನಟರು, ಅಂತ ಶೇಕ್ಸ್ಪೀಯರ್ ಯಾವಾಗ್ಲೋ ಹೇಳಿದ್ದ. ಹೇಳಿ ಸತ್ತೋದ, 400+ ವರ್ಷಗಳ ಕೆಳಗೆ, ತಲೆಗೆ ಈ ಹುಳ ಬಿಟ್ಟು. ಇಷ್ಟ ಇದಿಯೊ ಇಲ್ವೋ, ಬೇಡವಾದ ಮುಖವಾಡ ಧರಿಸಿ ನಟಿಸಬೇಕು. ಬೇಕಾಗೋ ಹಾಗೆ ಜೀವನ ಕಟ್ಟಿಕೊಳ್ಳೋಕ್ಕೆ; ಅಥವಾ ಬೇರೆಯವರ ಬೇಕು-ಬೇಡಗಳ ತಾಳೆಯ- ತಾಳಕ್ಕೆ ತಕ್ಕಂತೆ ಬದುಕಕ್ಕೆ. ಅಂತಹ ಬಂಡ ಬದುಕು ಕಟ್ಟಿಕೊಳ್ಳೋ ತವಕದಲ್ಲಿ ಮನಸ್ಸಿಗೆ ಒಲ್ಲದ ಪಾತ್ರ ಧರಿಸಬೇಕು. ಪಾತ್ರಕ್ಕೆ ತಕ್ಕಂತೆ ನಟಿಸಬೇಕು. ನಟನೆಗೆ ತಕ್ಕಂತ ಇನಾಮು ಅಪೇಕ್ಷಿಸ್ಬೇಕು. ಸಿಗದಿದ್ದಲ್ಲಿ ಶಲಿಮಾರ್ ಬಾರ್ ಗೆ ಹೋಗಿ, ಕ್ವಾರ್ಟರ್ ವಿಸ್ಕೀ ಹೀರುತ್ತಾ, ಅದರ ಮತ್ತಲ್ಲಿ ತೇಲುತ್ತಾ ನಮ್ಮ ಜೀವನದ ವ್ಯಥೆ-ಕಥೆಯ ಶಪಿಸುತ್ತ "ಡಿಂಗ್" ಆಗಬೇಕು. "Yes, certainly." "Am I audible?" "You definitely should!" "OMG, that's what I was thinking!!!" ಇವೆಲ್ಲದರ ಹಿಂದೆ, "ನನಿಗ್ ಯಾಕ್ ಇವೆಲ್ಲ?" ಅನ್ನೋ ಪ್ರಶ್ನೆಯ ಗುಂಜು. ಕೆಲಸ. ಸಂಸಾರ. ಸಮಾಜ. ವಿಶ್ವ ಯುದ್ಧ V3.0. ಟ್ರಂಪ್. ಕುಸಿಯುತ್ತಿರುವ ಸ್ಟಾಕ್ ಮಾರ್ಕೆಟ್. ಏರುತ್ತಿರುವ ಚಿನ್ನದ ಬೆಲೆ. ಮಟನ್ ಈಗ ರೂ.800+ ದಾಟಿದೆ. ದುಬಾರಿ ಜೀವನ. ಜಗತ್ತು ಮುಳುಗ್ತಾದೆ. ಈ ಬೋಳಿ ಮಕ್ಕಳಿಗೆ ROAS ಚಿಂತೆ. ಎಲ್ಲ ಕೆಲ್ಸ AI ಮಾಡುತ್ತಂತೆ. ಒಲ್ಲದ ಹುಡುಗಿಗೆ ಪ್ರೇಮ ಪಾತ್ರಗಳನ್ನು ಬರೆಯು...
Injurious to health if taken seriously. Potential NSFSP, read at your own discretion. Don't tell my mom.